May 7, 2010

ನನ್ನ ಕನ್ನಡ - My kannada [no more translation after this]

Here's a small li'l nothing that I had written sometime, on one of those days long back, sipping my bisi n strong coffee at Kalmane coffees. . .

ಕನ್ನಡ ನನ್ನ ಮಾತೃಭಾಷೆ, ನಾನು ನುಡಿವ ಭಾಷೆ, ಆದರೆ ನನ್ನ ಮಾತ್ರುಬಾಷೆಯಲ್ಲಿ ಬರೆದು ಬಹಳ ವರ್ಷಗಳಾಗಿವೆ. ಆದ ಕಾರಣ ಈ ಸಣ್ಣ ಪ್ರಯತ್ನ. ನನ್ನ ಕನ್ನಡ ಭಾಷೆ ಮತ್ತು ಪದಕೋಶವನ್ನು ಪರೀಕ್ಷಿಸುವ ಒಂದು ಸಣ್ಣ ಪ್ರಯತ್ನ. ಇಲ್ಲಿ ಬರೆಯಲು ನನಗೆ ಏನು ಇಲ್ಲ. ಆದರು ಒಂದು ನಾಲ್ಕು ಸಾಲುಗಳನ್ನು ಬರೆಯಲು ಬಯಸುತೇನೆ.
 ಮನದಾಳದ ಆಸೆಗಳನ್ನು ಬಣ್ಣಿಸಲು ನಾಲ್ಕು ಸಾಲುಗಳು ಸಾಲವು, ಆದುದರಿಂದ ಅದರ ಬಗ್ಗೆ ಬರೆಯುವ ಪ್ರಸಕ್ಥಿಯೇ ಇಲ್ಲ. ನನ್ನ ಸುತ್ತಮುತ್ತಲಿನ ಪರಿಸರವನ್ನು ವರ್ಣಿಸಲು ಇಷ್ಟವಿಲ್ಲ - ಏಕೆಂದರೆ ಅದರ ಬಗ್ಗೆ ನಾನು ಆಂಗ್ಲ ಬಾಷೆಯಲ್ಲಿ ಮೊದಲೇ ಬರೆದಾಗಿದೆ . . .

ಪದ್ಯಗಳನ್ನು ಬರೆಯಲು ನನ್ನ ಪ್ರಾಸ ಪದ ಸಂಕಲನ ಸಂಪಥ್ಬರಿಥವಾದ್ದುದಲ್ಲ. ಆದರು ಎಂದೋ ಒಮ್ಮೆ ಬರೆಯಲು ಮಾಡಿದ ಯತ್ನ ನೆನಪಾಗುತ್ತಿದೆ. ಅದರ ಮೊದಲ ಸಾಲು ಮಾತ್ರ ನನಗೆ ನೆನಪಿದೆ, ಮುಂದೆ ಏನೂ ಗೊತ್ತಿಲ್ಲ, ಏಕೆಂದರೆ ಏನು ಬರೆದಿಲ್ಲ. ಒಂದು ಯೋಚನೆ ಮೂಡುತಿದೆ. ನಾನು ಇಲ್ಲಿಯ ವರೆಗೆ ಏನೆಲ್ಲ ಆಂಗ್ಲ ಬಾಷೆಯಲ್ಲಿ ಬರೇದಿರುವೇನೂ ಅದನ್ನೆಲ್ಲಾ ಕನ್ನಡದಲ್ಲಿ ಬರೆದಿದ್ದರೆ, ಯಾರಿಗೂ ಅರ್ಥವಾಗುತಿರಲ್ಲಿಲ್ಲ. ಹಾಗಾಗಿ ಇನ್ನು ಮುಂದೆ ಯಾರಿಗೂ ತಿಳಿಯ ಬಾರದಾದ ವಿಷಯಗಳ ಬಗ್ಗೆ ನಾನು ಕನ್ನಡದಲ್ಲಿಯೇ ಬರೆಯುತೇನೆ. ಹಾಗಾದರೆ ಇಲ್ಲಿ ಬರೆದಿರುವುದು ಯಾರಿಗೂ ಅರ್ಥವಾಗಬಾರದಾದ ವಿಷಯ ಎಂದೇನೂ ಅಲ್ಲ, ಇದರಲ್ಲಿ ಅರ್ಥವಾಗಲು ಏನು ಇಲ್ಲ. . .

ಸ್ವಲ್ಪ ಸಮಯದ ನಂತರ . . . .

ಕಥೆ ಕಟ್ಟುವ  ಆಸೆಯಾಗುತಿದೆ. ನನ್ನ ಎದುರಲ್ಲಿ ಕುಳಿತಿರುವ ಮೂರು ವ್ಯಕ್ತಿಗಳನ್ನು ಬಳಸಿಕೊಂಡು ಒಂದು ಪುಟ್ಟ ಕಥೆ ಹೆಣೆಯುವ ಆಸೆ ಉಂಟಾಗುತಿದೆ. ನನಗವರು ಯಾರು ಎಂದು ತಿಳಿಯದ ಕಾರಣ, ಯಾರಿಗೆ ಯಾವ ಪಾತ್ರ ಕೊಡಬೇಕೆಂದು ಗೊತ್ತಾಗುತ್ತಿಲ್ಲ. ಆದರೆ ಅವರನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ನನಗೆ ಗೋಚರಿಸುವುದೆನೆದರೆ [ನನ್ನ ತಂಗಿ ಫೋನ್ ಮಾಡಿ ಏಕಾಗ್ರತ ಭಂಗ ಮಾಡಿದಳು] ಆದರು ನನ್ನ ಪ್ರಯತ್ನವನ್ನು ನಿಲ್ಲಿಸದೆ ನಾನು ಮುಂದುವರಿಸುತ್ತೇನೆ. - ನನಗೆ ತಿಳಿಯುವುದೆನೆದರೆ ಅಲ್ಲಿ ಇರುವ ಪಾತ್ರಗಳು ತಾಯಿ, ಮಗ ಹಾಗು ಮಗನ ಸ್ನೇಹಿತೆ [ಭಾವಿ ಬಾಳ ಸಂಗಾತಿಯೂ ಇರಬಹುದು - ಅಥವಾ ಅದೇ ಪ್ರಯತ್ನದಲ್ಲಿಯೂ ಇರ ಬಹುದು]
ಏಕೆ ????
ಅವರು ತಾಯಿ, ಮಗಳು ಹಾಗು ಮಗಳ ಸ್ನೇಹಿತನೂ ಇರಬಹುದು??? ಇರಬಹುದು . . . ಯಾರು ಇಲ್ಲ ಅಂದಿದ್ದು, ಆದರೆ ಇದು ನನ್ನ ಕಥೆ, ನನ್ನ ಮುಂದೆ ನಡೆಯುತಿರುವ, ನಾನು ಬರೆಯುತಿರುವ ಕಥೆ, ನಾನು ಸೂತ್ರದಾರ, ಅವರ ಪಾತ್ರಗಳನ್ನೂ ನಾನೇ ನಿರ್ಧರಿಸುತ್ತೇನೆ . . .

ನಾನು ಆ ಪಾತ್ರಗಳು ಹಾಗೆಂದು ನಿರ್ಧರಿಸಲು ಒಂದು ಕಾರಣವಿದೆ. ತಾಯಿ ಪಾತ್ರದ ವ್ಯಕ್ತಿ ಮತ್ತು ಆ ಹುಡುಗಿಯ ಮಧ್ಯೆ ನಡೆಯುತಿರುವ ಮಾತುಕತೆಯ ದೃಶ್ಯ - ದೃಶ್ಯ ಮಾತ್ರ ಮಾತುಕತೆಯಲ್ಲ. ಏಕೆಂದರೆ ನನ್ನ ಕಿವಿಯಲ್ಲಿ ಇಂಪಾದ ಸಂಗೀತ ಕೇಳಿ ಬರುತ್ತಿದೆ. ನನ್ನ ಮುಂದೆ ನಡೆಯುತ್ತಿರುವುದು ಕೇವಲ ಒಂದು ದೃಶ್ಯ ಚಿತ್ರ ಮಾತ್ರ, ಅವರ ಮಾತುಗಳನ್ನು ನಾನೇ ನುಡಿಯುತ್ತೇನೆ . . . . 

ತಾಯಿಯು ತನ್ನ ಮಗನ ಬಗ್ಗೆ ಆ ಹುಡುಗಿಯ ಬಳಿ ಚರ್ಚಿಸುತ್ತಿದ್ದಾರೆ. ಮಗನಿಗೆ ಜೀವನದ ಬಗ್ಗೆ ಹೇಳುತಿದ್ದಾರೋ ಇಲ್ಲವೋ ಗೊತ್ತಿಲ್ಲ ಆದರೂ ಹೇಳುತ್ತಿದ್ದಾರೆ ಅಂತ ತಿಳಿದುಕೊಳ್ಳೋಣ.ಅದರಲ್ಲೇನು ತಪ್ಪಿಲ್ಲ.  ಜೀವನದ ಬಗ್ಗೆ ಎಲ್ಲರಿಗು ತಿಳಿದಿರಬೇಕು ಯಾರು ಯಾರಿಗೆ ಬೇಕಾದರೂ ಹೇಳಬಹುದು ಕೇಳೋದು ಬಿಡೋದು ಅವರವರ ವಯಕ್ತಿಕ ವಿಚಾರ ....
ಇಷ್ಟೆಲ್ಲಾ ಮಾತಾಡಿದ ನಂತರ ಇಲ್ಲಿಂದ ಅವರು ಹೊರಟರೆ ,ಮುಂದೆ ಅವರು ಏನಾದರು ಎಂಬ ಪ್ರಶ್ನೆ ನನ್ನನು ಕಾಡುವುದು ಸಹಜ ಆದರೆ ನಾನು ಮೊದಲೇ ಹೇಳಿದ ಹಾಗೆ ಇದು ನನ್ನ ಕಥೆ, ನಾನು ಬರೆಯುತ್ತಿರುವ ಅವರ ಕಥೆ, ಮುಂದೆ ಅವರಿಗೆ ಏನಾಯಿತು ಎಂಬ ಪ್ರಶ್ನೆಯನ್ನು ನಾನು ಕೇಳದೆಯೇ ಈ ಕಥೆಯನ್ನು ಮುಗಿಸಬಹುದು.

ಆ ಮುರೂ ಜನರ ಮಾತು ಕತೆಯಲ್ಲಿ ಒಂದು ಬಗೆಯ ಖುಷಿ  ತುಂಬಿ ತುಳುಕುತ್ತಿದೆ. ಅದು ನಕಲಿ ನಗುವಲ್ಲ , ಮನದಾಳದಿಂದ ಬರುತ್ತಿರುವ ಆನಂದದ ಸಂಕೇತ ...ಎಷ್ಟೆಲ್ಲಾ ಖುಷಿ ತುಂಬಿರುವ ಆ ಮುರೂ ಪಾತ್ರಗಳ ಕಥೆಯನ್ನು ನಾನು ಮುಂದುವರೆಸಿದರೆ , ಅದು ಕೇವಲ ನನ್ನ ಕಾಲ್ಪನಿಕ ಶಕ್ತಿಯ ಹಾಗು ನಾನು ಬರೆಯುವಾಗ ನನ್ನ ಸುತ್ತಲಿನ ಪರಿಸ್ಥಿತಿಯ ಮೇಲೆ ಅದರಿತವಾಗಿರುತ್ತದೆ .

ಆದ್ರೆ ಆ ಮುರೂ ಪಾತ್ರಗಳ ಸುಂದರ ಜೀವನವನ್ನು  , ನನ್ನ ಪರಿಸ್ಥಿತಿಯ ಕಾರಣದಿಂದ ದುರಂತ ಕಥೆ ಮಾಡುವ ಆಸೆ ನನಗಿಲ್ಲ , ಆ ಮುರೂ ಪಾತ್ರಗಳು  ಖುಷಿ ಖುಷಿಯಿಂದ ಕಾಫಿ ಕುಡಿದು ಏನೋ ಒಂದು ನಿರ್ಧಾರ ತೆಗೆದುಕೊಂಡು ಹೊರಟು ಹೋದರು . ಹೊರಟು ಹೋದ ಪಾತ್ರಗಳ ಬೆನ್ನಟ್ಟಿ  , ಅವರನ್ನು ಹಿಡಿದು, ನಾನು ಬಯಸುಹುದನ್ನು ಅವರು ಅವರ ಜೀವನದಲ್ಲಿ ಅನುಬವಿಸುವಂತೆ ಮಾಡಿದರೆ ನಾನು "ದೇವರ" ಸಮನಾಗುತ್ತೇನೆ . ನನಗೆ ದೇವರಲ್ಲಿ ನಂಬಿಕೆಯೂ ಇಲ್ಲ, ದೇವರಾಗುವ ಆಸೆಯು ಇಲ್ಲ, ಅದ ಕಾರಣ ಅವರು ಇಲ್ಲಿಂದ ಹೊರಟಾಗ ಅವರ ಮುಖದಲ್ಲಿದ್ದ ಖುಷಿ ಮತ್ತು ಉಲ್ಲಾಸ ಚಿರವಾಗಿರಲಿ ಎಂದು ಬಯಸುತ್ತ ನನ್ನ ಈ ಕಥೆಯನ್ನು, ನಾನು ಬರೆಯುತ್ತಿರುವ ಅವರ ಕಥೆಯನ್ನು ಇಲ್ಲಿಗೆ ಮುಗಿಸುತ್ತೇನೆ ..... ನಮದಲ್ಲದನ್ನು ದುರಂತದಲ್ಲಿ ಸಿಲುಕಿಸುವುದಕ್ಕೆ  ನಮಗೆ ಯಾವ ಹಕ್ಕು ಇಲ್ಲ , ಎಲ್ಲರು ನಂಬುವ ಅವನಿಗೂ ಇಲ್ಲ ....

4 comments:

  1. ಫೋನ್ ge Kannada pada bariyo loafer.......

    ReplyDelete
  2. JANGAMA GANTE SANCHARI DURAVANI - mobile phone

    ReplyDelete
  3. tumba chennagidhe....:-)..nimage istu olle idea elli siguthe..Ondu sanna incident mele istu chennagi barediddira..:-)

    ReplyDelete
  4. kaasu kottu kondkolltheeni . . . jebinalli ittukondu thirgaadtha irthini, mood bandaaga pen thagondu geechbidtheeni . . . just kidding.

    namma suttha nadeyodanna naavu nammagishta bandanthe nododakke, yaara appaneyu bekilla. . . naavu nodiddu, naavu bayasiddu, naavu barediddu yella nammage beku ansiddashtte. . .:)

    BTW thanks.

    ReplyDelete