ಮತ್ತೊಮ್ಮೆ ಕನ್ನಡದಲ್ಲಿ ಬರೆಯುವ ಆಸೆಯಾಗುತಿದೆ. ಏಕೆ? ಏನು? ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು, ಆದರೂ, ಆ ಪ್ರಶ್ನೆಗಳು ತುಂಬಾ ಪ್ರಮುಖವಾದವು. ಮತ್ತೊಮ್ಮೆ ಏಕೆ ಎಂದು ಕೇಳಿದರೆ, ಅದಕ್ಕೂ ಅದೇ ಉತ್ತರ, ಅದೂ ಸಹ ಉತ್ತರವಿಲ್ಲದ ಪ್ರಶ್ನೆ. ಇದುವರಗೆ ಬರೆದಿರುವುದನ್ನು ಓದಿದರೆ ಇನ್ನೊಂದು ಪ್ರಶ್ನೆಯುಟ್ಟುತದೆ. "ಪ್ರಶ್ನೆ" ಎಂದ ಕೂಡಲೇ ಮನಸ್ಸಿಗೆ ಅನಿಸುವುದೇನೆಂದರೆ ಆ ಪ್ರಶ್ನೆಗೂ ಉತ್ತರವಿಲ್ಲವೇ ???? ಎಂದು. ಪ್ರಶ್ನೆಯನ್ನು ಹುಟ್ಟುಹಾಕುವ ಮುಂಚೆಯೇ, ಆ ಪ್ರಶ್ನೆಗೆ ಉತ್ತರ ಇರುವುದೋ, ಇಲ್ಲವೋ ಎಂದು ಲೆಕ್ಕಾಚಾರ ಮಾಡುವುದು ತಪ್ಪು. ಇದು ನನ್ನ ವಯಕ್ತಿಕ ವಿಚಾರ. ಇನ್ನೂ ನಾ ಆ ಪ್ರಶ್ನೆಯನ್ನು ಕೇಳಲೇ ಇಲ್ಲ, ಪ್ರಶ್ನೆ ಏನೆಂದರೆ - ಇಲ್ಲಿ ನಾನು ಬರೆಯ ಬಯಸುವುದು ಕೇವಲ ಉತ್ತರವಿಲ್ಲದ ಪ್ರಶ್ನೆಗಳೇ???? ಆದರೆ ಈ ಪ್ರಶ್ನೆಗೆ ಮಾತ್ರ ನನ್ನ ಬಳಿ ಉತ್ತರ ಇದೆ. ಹಾಗಾದಲ್ಲಿ ಉತ್ತರ ಏನು ???
ಉತ್ತರ ತಿಳಿಯಲು ಎಲ್ಲರಿಗೂ ಹಂಬಲವಿರುತ್ತದೆ. ನನಗೂ ಇದೆ. ಇಲ್ಲ, ನನಗೆ ಉತ್ತರ ತಿಳಿದಿದೆ. ಆದರೆ ಉತ್ತರ ಬರೆದಾದ ನಂತರ, ಉತ್ತರ ತಿಳಿಯುವ ಆ ಹಂಬಲ ಸತ್ತುಹೋಗುತ್ತದೆ. ನನ್ನ ಆ ಪ್ರಶ್ನೆಗೆ ಉತ್ತರ ತಿಳಿದಿದೆ ಎಂದರೆ, ಆ ಉತ್ತರ ಸರಿ ಎಂದೇನೂ ಅಲ್ಲ, ನನ್ನ ಉತ್ತರ ತಪ್ಪಾಗಿಯೂ ಇರಬಹುದು. ಉತ್ತರ ಏನೆ ಇರಲಿ, ಅದು ನನ್ನ ಉತ್ತರ. ನನ್ನ ಪ್ರಶ್ನೆಗೆ ನಾನೇ ಸೃಷ್ಟಿಸಿದ ಉತ್ತರ, ಅದನ್ನು ತಪ್ಪೆಂದು ಹೇಳುವ ಹಕ್ಕು ಯಾರಿಗೂ ಇಲ್ಲ. . . .
ಇಷ್ಟೆಲ್ಲಾ ಸಂವಾದದ ನಂತರ - ನಾನು ಆ ಪ್ರಶ್ನೆಗೆ ಉತ್ತರ ಹೇಳದ್ದಿದರೆ, ಇಲ್ಲಿಯ ವರಗೆ ನಾನು ಬರೆದದ್ದಿದು, ನೀವು ಓದಿದ್ದಿದು, ಎಲ್ಲ ವ್ಯರ್ಥವಾಗುತದೆ.
ಈ ಸಮಯದಲ್ಲಿ ಇನ್ನೊಂದು ಪ್ರಶ್ನೆಯನ್ನು ಇಲ್ಲಿ ಹುಟ್ಟುಹಾಕಿದರೆ, - "ನಾನು ಆ ಪ್ರಶ್ನೆಗೆ ಉತ್ತರ ಹೇಳದ್ದಿದರೆ, ಇಲ್ಲಿಯ ವರಗೆ ನಾನು ಬರೆದದ್ದಿದು, ನೀವು ಓದಿದ್ದು, ಎಲ್ಲ ವ್ಯರ್ಥವಾಗುತದೆ - ಯೇ ? ? ?
ಈ ಪ್ರಶ್ನೆಗೂ ಉತ್ತರವಿದೆ, ಪ್ರತಿಯೊಬ್ಬರಿಗೂ ಅವರವರ ವಯಕ್ತಿಕ ಉತ್ತರ ದೊರೆಯುತ್ತದೆ. ಆದರೆ ಅವರವರ ಉತ್ತರಗಳು, ಪ್ರಶ್ನೆಯ ಎರಡೆನೇ ಭಾಗದಲ್ಲಿ ಮಾತ್ರ ಸರಿ ಇರುತ್ತವೆ . . . ಹಾಗಾದರೆ ಮೊದಲನೇ ಭಾಗ ಪ್ರಶ್ನೆಯಾಗಿಯೇ ಉಳಿಯುತ್ತದೆಯೇ ? ? ? ? ಇಲ್ಲ, ಅವರವರ ಉತ್ತರಗಳು, ಅವರವರ ದೃಷ್ಟಿಕೋನದಲ್ಲಿ ಸರಿಯಾಗಿಯೇ ಇರುತ್ತದೆ, ಆದರೆ ಮೊದಲ ಭಾಗದ ಪ್ರಶ್ನೆಗೆ ಉತ್ತರ ಸರಿಯೋ? ? ? ತಪ್ಪೋ ? ? ? ಎಂಬ ನಿರ್ಧಾರ ಮಾಡುವ ಹಕ್ಕು ಕೇವಲ ನಾನೋಬ್ಬನಿಗೆ ಮಾತ್ರ ಇರುತದೆ. ಹಾಗೆಯೆ ಪ್ರಶ್ನೆಯ ಎರಡನೇ ಭಾಗಕ್ಕೆ ನನ್ನ ಬಳಿ ಇರುವುದು ಕೇವಲ ನನ್ನ ಉತ್ತರ ಮಾತ್ರ, ಅದರ ಸರಿತನ ಅಥವಾ ತಪ್ಪುತನದ ನಿರ್ಧಾರ ನಿಮಗೆ ಬಿಟ್ಟಿದ್ದು . . .
ನಾನು ಕೇಳಿದ ಒಂದು ಪ್ರಶ್ನೆಗೆ ಉತ್ತರ ಹೇಳಬೇಕೋ? ? ? ಬೇಡವೋ ? ? ? ಎಂಬುದರ ಬಗ್ಗೆ ನಾ ಇಷ್ಟು ಉದ್ದ ವ್ಯಾಖ್ಯಾನ ಬಿಗಿದರೆ, ಇನ್ನು ನನ್ನ ಉತ್ತರ ಎಷ್ಟು ದೊಡ್ಡದಿರಬಹುದು ? ? ? ಎಂಬ ಭಾವನೆ ನಿಮ್ಮಲಿ ಮೂಡುವುದು ಸಹಜ.
ಅದಕ್ಕೂ ಮುಂಚೆ, ನಾನು ಇಷ್ಟೆಲ್ಲಾ ಬರೆಯುವುದಕ್ಕೆ ಮೊದಲು, ಕನ್ನಡದಲ್ಲಿ ಬರೆಯ ಬಯಸಲು ಒಂದು ಚಿಕ್ಕ ಕಾರಣವಿದೆ. ಮನಸ್ಸಿನ ಯೋಚನೆಗಳನ್ನು ಮಾತ್ರುಭಾಷೆಯಲ್ಲಿ ಹೊರಹಾಕಲು ಸುಲಭ ಹಾಗು ಸಹಜ ಎಂದು, ಎಂದೋ ಒಮ್ಮೆ ಓದಿದ್ದೆ . . . ಅದೇ ಕಾರಣದಿಂದ ಬರೆಯಲೂ ಆರಂಭಿಸಿದೆ.
ಆದರೆ ಹೊರ ಬಂದಿದ್ದು ಯೋಚನೆಗಳಲ್ಲ, ಕೇವಲ ಪ್ರಶ್ನೆಗಳು . . . . ಉತ್ತರವಿಲ್ಲದ ಪ್ರಶ್ನೆಗಳು. "ಇಲ್ಲ. . . "
No comments:
Post a Comment