Oct 29, 2010

ಬರಹಗಾರನಿಗೊಂದು ಪತ್ರ

ನಮಸ್ಕಾರ ಸ್ವಾಮೀ,
ನಿಮ್ಮ ಪುಸ್ತಕ ಕೊಂಡ್ಡಿದೇನೆ, ಕೊಂಡ್ದಿದಕ್ಕೆ ಒಂದು ಬಗೆಯ ಖುಷಿ, ಇನ್ನೂ ಓದಿ ಮುಗಿಸಿದರೆ ಅನುಭವಿಸಬಹುದಾದ ಆನಂದವನ್ನು ಕಲ್ಪಿಸಿಕೊಂಡರೆ ಮೈ jhumm ಅನ್ನಿಸುತ್ತೆ. ಕಳೆದ ಭಾನುವಾರ C K P ಗೆ ಹೋಗಿದ್ದೆ, ಅಲ್ಲೇ ಆದದ್ದು ನಿಮ್ಮ ಪುಸ್ತಕದೊಂದಿಗೆ ನನ್ನ ಮೊದಲ ಭೇಟಿ. . . . "ಇಲ್ಲಿ ಚೀಟಿ ಅಂಟಿಸಬಾರದು", ಎಂದು ಕೂಗುವ ಒಂದು ಗೋಡೆಯ ಮೇಲೆ ನಿಮ್ಮ ಪುಸ್ತಕದ ಮುಖಪುಟ ನೋಡಿದೆ. ಅದರ ಮೇಲಿದ್ದ ನಿಮ್ಮ ಭಾವಚಿತ್ರ ನನಗೆ ಏನೋ ಹೇಳಿತು - ಜ್ಞಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ, Rs ೧೫೦/- ಜಾಸ್ತಿ ಏನು ಅಲ್ಲ, ಹೋಗಿ, ಕೊಂಡು, ಓದು. . . ಕಿವಿಯಲ್ಲಿ ನೀವೇ ಬಂದು ಹೇಳಿದಂತಾಯಿತು. C K P ಹತ್ರ ಎಲ್ಲೂ ಪುಸ್ತಕ ಸಿಗಲಿಲ್ಲ. . . . 

ಮರುದಿನ ಅಂಗಡಿ ಮುಚ್ಚುವ ಸಮಯಕ್ಕೆ ಸರಿಯಾಗಿ ಜಯನಗರದ ಓಂಕಾರ ಪುಸ್ತಕ ಬಂಡಾರಕ್ಕೆ ಲಗ್ಗೆ ಹಾಕಿದೆ. ನನ್ನ ಪುಣ್ಯ ನಿಮ್ಮ ಪುಸ್ತಕದ ಬಗ್ಗೆ ಅವರಿಗೆ ತಿಳಿದಿತ್ತು. ತಿಳಿದು, ಮತ್ತೆ ಖುಷಿಯಾಯಿತು. ಪುಸ್ತಕ ಖಾಲಿಯಾಗಿತ್ತು - ಮತ್ತೊಮ್ಮೆ ಖುಷಿಯ ಅನುಭವ. ಪಕ್ಕದಲ್ಲೇ ನಮ್ಮ ಇನ್ನೊದು ಅಂಗಡಿ ಇದೆ, ತಂದು ಕೊಡುತ್ತೇನೆ. ಸ್ವಲ್ಪ ಕಾಯುತ್ತೀರಾ ? ? ? ಕೊಳ್ಳೋದಕ್ಕೆ ಸಿದ್ದನಾದ ಮೇಲೆ ಕಾಯೋದಕ್ಕು ತಯಾರಾಗಿದ್ದೆ. ನನ್ನ ಫೋನ್ ನಂಬರ್ ಕೊಟ್ಟು ಕಾಫಿ ಅಂಗಡಿಯಲ್ಲಿ ಕುಳಿತು ಪುಸ್ತಕದ ಬಗ್ಗೆಯೇ ಯೋಚನೆ ಮಾಡ್ತಾ ಇದ್ದೆ. . . . ಅದರಲ್ಲೂ ಒಂದ್ತರಾ ಸಂತೋಷ, ನಂಬಿದರೆ ನಂಬಿ ಬಿಟ್ಟರೆ ಬಿಡಿ ! ! ! ! !

ಕಾದಿದ್ದು ಕೊಂಡ ಪುಸ್ತಕ ನನ್ನ ಕೈಯಲ್ಲಿತ್ತು, ಅದೊಂದು ಬಗೆಯ ಖುಷಿ. ಬಣ್ಣಿಸಲು ನನಿಂದಾಗದ ಕೆಲಸ. ನನ್ನ ಕನ್ನಡ ಪದ ಸಂಕಲನದ ಕೊರತೆ, ಇದಕ್ಕೆ ಕಾರಣ ಎಂದು ಹೇಳಲು ವಿಷಾದಿಸುತ್ತೇನೆ. ಆದ್ರೆ ಒಂದು ಮಾತ್ರ ಕಚಿತ. ಓದಿದೆಲ್ಲ ಅರ್ಥ ಮಾಡಿಕೊಳ್ಳೋ ಶಕ್ತಿ, ಸಾಮರ್ಥ್ಯ ನನಗಿದೆ. ನೀವು, ನನ್ನ ಪುಸ್ತಕ ' useless ' [ಅವನನ್ನ ಏನು ಅಂತಾರೆ ಸ್ವಾಮೀ] ನನ್ನ ಮಗನ ಕೈಯಲ್ಲಿದೆ ಎಂಬ ದುಃಕ ನಿಮಗೆ ಬೇಡ . . . 

ಇಷ್ಟೆಲ್ಲಾ ಅನುಭವಿಸಿ, ಕೊಂಡ ಪುಸ್ತಕದ ಮೊದಲ ಸಾಲು ಓದಿದೆ.  ಅರ್ಪಣೆ. . . . ನೀವೇ ಹೇಳಿದ ಹಾಗೆ Rs ೧೫೦/- ವ್ಯರ್ಥವಾಗಲಿಲ್ಲ ಎಂಬ ಸಾರ್ಥಕತೆಯ ಅನುಭವ, ಅದರಿಂದಾದ ಆನಂದಕ್ಕೆ ಎಲ್ಲೇ ಇಲ್ಲ. . . . ಮುನ್ನುಡಿ ಓದಿದೆ, ಲಾಟರಿ ಹೊಡೆದ ಆನಂದ. ಏಕೆ ? ಅಂತೀರಾ ? ? ?  ನಿಮ್ಮ e mail I D ಸಿಕ್ತು ಅನ್ನೋ ಸಂತೋಷ. I D ಸಿಕ್ಕಿದಾಕ್ಷಣ mail ಕಲಿಸಬೇಕೆಂದು ನಿರ್ಧರಿಸಿದೆ. ಅವಕಾಶ ಸಿಗಲಿಲ್ಲ. . . . Almost ಅರ್ಧ ಪುಸ್ತಕ ಒದಾಗಿದೆ. ಆದರೂ ನನ್ನ ಅನಿಸಿಕೆ ನಿಮಗೆ ತಿಳಿಸಲು ಇಷ್ಟವಿಲ್ಲ. ಅಲ್ಪ ಸ್ವಲ್ಪ ನಾನು ಬರಿತ್ತೀನಿ, ಬರಹಗಾರನ ಕಲ್ಪನೆಗೂ, ಓದುಗನ ಕಲ್ಪನೆಗೂ ಅಜಗಜಾಂತರ ವ್ಯತ್ಯಾಸವಿರುವ ಸತ್ಯ ನನಗೆ ಗೊತ್ತು. . . . MaTa ಮತ್ತು ಎದ್ದೇಳು... ಎಷ್ಟು ಸಾರಿ ನೋಡಿದರೂ ನನ್ನ ಪರಿಸ್ಥಿತಿಯಾ ಕಾರಣದಿಂದಲೋ ಏನೋ - ಏನೋ ಒಂದು ಹೊಸ ವಿಷಯ ತಿಳಿದ ಅರಿವು ನನ್ನನ್ನು ಕಾಡುತ್ತದೆ. ಪುಸ್ತಕವೂ ಹಾಗೆ ಇದೆ ಎಂದು ಮಾತ್ರ ಹೇಳಲು ಬಯಸುತ್ತೇನೆ . . . . 

ನೀವು ಹೇಳಿದಕ್ಕೆ ತದ್ವಿರುದ್ದವಾಗಿ, ನೀವು ಯಾವ ಪುಸ್ತಕದ ಮುನ್ನುಡಿ ಓದುವುದಿಲ್ಲವೋ, ಅದೇ ಮುನ್ನುಡಿಯನ್ನು ಓದಿದ ಕಾರಣದಿಂದ ಹುಟ್ಟಿದ ಪತ್ರ ಇದು. ಓದಿದ ಆ ಕ್ಷಣ , ಬರೆಯಬೇಕೆನಿಸಿದ ಆ ಕ್ಷಣ, ಬರೆಯಲು ನನಗೆ ಅವಕಾಶ ಸಿಕ್ಕಿದಿದ್ದರೆ, ಇದೆ ನನ್ನ ಮೊದಲ ಸಾಲಗಿರುತಿತ್ತೇನೋ? ? ? ಇಂತಿ ನಿಮ್ಮ, ಸದಾ ಎದ್ದಿರುವ ಮಂಜುನಾಥ, ಮಂಜುನಾಥನ ಹೆಸರು,

ಯತೀಸ. . . 
ಎದ್ದೆ ಇರ್ತೀನಿ, ಯಾವಾಗ ಬೇಕಾದ್ರೂ reply ಮಾಡಬಹುದು, expectation ಏನೂ ಇಲ್ಲ. . . . 






1 comment: